ಕತ್ತಲಲ್ಲಿ ದ್ವೈತವಿಲ್ಲ
ಕತ್ತಲಿಲ್ಲದೇ ಬೆಳಕಿಲ್ಲ,ಅಪರಿಮಿತ ಕತ್ತಲಿಂದ ಹುಟ್ಟಿದಂತೆ ಬೆಳಕುನನ್ನೆದೆಯ ನಿರಾಕಾರ ಪ್ರೇಮವೇ, ಸಾಕಾರರೂಪತಾಳುತ್ತದೆ, ನಿನ್ನ ಬಯಸುತ್ತದೆ.ಗಾಢ ಕತ್ತಲೆಯಂತ ನಿರಾಕಾರರೂಪಿ ಒಲವಲ್ಲಿಲ್ಲ ಬಯಕೆ, ಅದು ಪಡೆದು ತೃಪ್ತ. ಬೆಳಕೆಂದರೆ ವಿರಹ,ಮುಂಜಾನೆ ಹುಟ್ಟಿ, ಆಗಸಕ್ಕೇರಿಮೆಲ್ಲ ಸಂಜೆಗೆ, ಕತ್ತಲಿನ ಮಡಿಲಿಗೆ ಸೇರುತ್ತದೆ, ಕತ್ತಲಲ್ಲಿ ದ್ವೈತವಿಲ್ಲ.